ನಮ್ಮದೊಂದು ಚಿಕ್ಕ ಫ್ಯಾಮಿಲಿ...ಪ್ರತಿದಿನವೂ ಅಲ್ಲಿ ಲವಿಲವಿಕೆ , ಹೊಸ ಹುಮ್ಮಸ್ಸು, ಏನೋ ಚೈತನ್ಯ. ಒಂದು ಕಡೆ ಅಪ್ಪ ಯಾವಾಗಲೂ ಏನೋ ಒಂದು ಕೆಲಸದಲ್ಲಿ ನಿರತರ. ಏನಾದರೊಂದು ಮಾಡಬೇಕು. ಹೊಸ ಬಾಳೆ ಗಿಡ ನಡುವುದೋ, ದನಗಳಿಗೆ ಹುಲ್ಲು ತರುವುದೋ, ತೋಟದಿಂದ ತೆಂಗಿನ ಕಾಯಿ ತರೋದ.... ಅದರಲ್ಲೇನೆ ತುಂಬಾ ಸಂತೋಷ ಪಡಿತಾರೆ. ಮಾಡಿದ ಪ್ರತಿಯೊಂದು ಕೆಲಸದಲ್ಲೂ perfection . ಅಮ್ಮ ತಾನೇನು ಕಡಿಮೆ ಎಂಬಂತೆ ಪ್ರತಿ ನಿಮಿಷವೂ ವೇಸ್ಟ್ ಆಗಕ್ಕೆ ಬಿಡಲ್ಲ. ಫ್ರೀ ಟೈಮ್ ಸಿಕ್ಕರೆ ತನ್ನ ಮುದ್ದಿನ ನಾಯಿ,ಬೆಕ್ಕು, ದನ ಕರುಗಳೊಂದಿಗೆ ಆಟ ಆಡ್ತಾ ಇರ್ತಾಳೆ ನನ್ನ ಪುಟ್ಟ ಅಮ್ಮ. ಇವುಗಳಿಗೆಲ್ಲ ಊಟ , ನೀರು .. ಇವಳೇ ಕೊಡ್ಬೇಕು... ಯಾವಾಗಲೂ ಅಡಕೆ ತೋಟ ದಲ್ಲೋ ಹೂವಿನ ತೋಟದಲ್ಲೋ ಇರ್ತಾಳೆ. ನೀವೆಲ್ಲರೋ ಖುಷಿಯಾಗಿದ್ದರೆನೆ ನಾನು ಖುಷಿ ಎಂಬುದೇ ಅವಳ ಮಂತ್ರ. ಹೀ ಹೀ ಅಂತ ನಗ್ತಾಳೆ ನಾನು ಪ್ರತಿ ಸಲ ಫೋನ್ ಮಾಡಿದಾಗಲೂ. ಏನೋ ಅಭಿಮಾನ, ಪ್ರೀತಿ, ಖುಷಿ ಅವಳಿಗೆ ... ಅವಳೇ ನನ್ನ ಮುದ್ದಿನ ಅಕ್ಕ. ನೋಡಲು ಚಿಕ್ಕವಳಾಗಿದ್ದರೂ ದೊಡ್ಡ ಅಕ್ಕ. ಮತ್ತೊಬ್ಬ ಬ್ಯುಸಿ ಮ್ಯಾನ್ ಬಿಸಿನೆಸ್ ಮ್ಯಾನ್ ನನ್ನ ಪ್ರೀತಿಯ ತಮ್ಮ . ಜೀವನದಲ್ಲಿ ಏನೋ ಮುಂದು ಬರಬೇಕೆಂಬ ಉತ್ಸಾಹ.. ನನ್ನ ತಮ್ಮನೂ ಹೌದು... ನನ್ನ ಪ್ರಾಣ ಗೆಳಯನೂ ಹೌದು.
ಮೊನ್ನೆ ನಾನ ವಿದೇಶ ಪ್ರಯಾಣ ವಿಷಯ ಅಮ್ಮನಿಗೆ ಹೇಳಿದಾಗ... ಈ ಸಲ ಎಷ್ಟು ಸಮಯ ಇರ್ಬೇಕು? ನಾನಂದೆ ಎರಡು ಮೂರು ತಿಂಗಳೇ ಅಸ್ಟೇ ಅಂದಾಗ ಏನೋ ಸಮಾಧಾನ ಅವಳಿಗೆ. ಮನಸಲ್ಲಿ ಬೇಡ ಅಂತಾನೇ ಇರ್ತದೆ. ಹೇಳಿದ್ರೆ ಬಯ್ತಾನೆ ಅಂತ.. ಅಲ್ಲಿಗೆ ಸುಮ್ಮನಗಿರ್ತಾಳೆ. ಅಪ್ಪನಂತೂ ಏನೋ ಮಾತನಾಡಾದೆ ಖುಷಿಯಿಂದ ಹೋಗಿ ಬಾ ಮಗನೆ... ಅವರಸ್ಟೆ ತುಂಬಾನೆ ಮಾತನಾಡಲ್ಲ. ಮನಸಿನಳೋಗೆ ಖುಷಿ ಪಡ್ತಾರೆ. ತಮ್ಮ ನಂತೂ ಮೋಡಲೇ ಎಲ್ಲರಿಗೂ ಆಗಲೇ ಹೇಳಿಯಾಗಿತ್ತು. ಪ್ರತಿ ಸಾರಿ ನನ್ನ ವಿದೇಶ ಪ್ರಯಾಣದ ಮುಂಚಿನ ದಿನ ನನ್ನ ಬೆಂಗಳೂರಿನ ಮನೆಯಲ್ಲಿ ರೆಡಿ. ಅವನದೇ ಪ್ಯಾಕ್ಕಿಂಗ್ , ಅವನದೇ ಕಾರುಬಾರು. ಅವನ ಕೆಲಸದಲ್ಲಿ ಬ್ಯುಸಿ ಇದ್ದರು ಸಮಯ ಮಾಡ್ಕೊಂಡು ಬರ್ತಾನೆ. ಮನೆಯಿಂದ ಏನೋ ಅಮ್ಮ ಮಾಡಿದ ತಿಂಡಿ ತೆಕೊಂಡು ಬರ್ತಾನೆ. ಅಕ್ಕನಿಗೆ ಏನೋ ಹೆಮ್ಮೆ ... ನನ್ನ ಮುದ್ದಿನ ತಮ್ಮ ಪ್ರಪಂಚ ಸುತ್ತುತ್ತಾ ಇದ್ದನಲ್ವ... ಆಗಲೇ ಇದು ಮೂರನೇ ದೇಶ. ... ಕೌಂಟ್ ಸುರು ಆಗಿತ್ತು ... ನನ್ನ ವಿಸಿಟಿಂಗ್ ಕಾರ್ಡ್ ನೋಡಿ ಇನ್ನ ಈ ಕಂಪನಿ ಇಂದ ಇನ್ನ ಎಷ್ಟು ದೇಶ ಬಾಕಿ ಇದೆ ಅಂತ ಆಗಲೇ ಹೇಳಿಯಾಗಿತ್ತು ಅವಳಿಗೆ.
ಮೊನ್ನೆ ನಾನು ಬರೋ ಮುಂಚೆ ಬೆಲ್ಟ್ ತೆಗೆದುಕೊಳ್ಳಲು ಮರೆತಿದ್ದೆ . ಇರೋ ಬೆಲ್ಟ್ ಅಂತೂ ತುಂಬಾನೆ ಹಳತು. ಅದನ್ನ ನೋಡಿದ ತಮ್ಮ ಇಕೋ ನನ್ನ ಹೊಸ ಬೆಲ್ಟ್ ಅದು ನನಗೆ ಕೊಡು ಎಂದು ನನ್ನ ಹಳೆ ಬೆಲ್ಟ್ ತೆಕೊಂಡು ನನಗೆ ಹೊಸ ಬೆಲ್ಟ್ ಕೊಟ್ಬಿಟ್ಟ. ನನ್ನೊಂದಿಗೆ ಏರ್ಪೋರ್ಟ್ ತನಕ ಬಂದು ಚೆಕ್ಕಿಂಗ್ ಗೇಟ್ ಹತ್ರ ನನ್ನ ಮನಸಾರೆ ತಬ್ಬಿಕೊಂಡು ಹೋಗಿ ಬಾ ಅಣ್ಣ .. ಫೋನ್ ಮಾಡು.. ಅಂತ ಹೇಳಿ ನಾನು ಚೆಕ್ ಇನ್ ಅದ ಮೇಲೂ ಕೈ ಬೀಸುತ್ತ ಅಲ್ಲೇ ನಿಂತಿದ್ದ... ತನ್ನ ಪ್ರೀತಿಯ ನಗುವಿನೊಂದಿಗೆ...
ತುಂಬಾನೆ ಬರಿಯೋಕೆ ಆಗ್ತಾ ಇಲ್ಲ.. ಏನೇನೋ ಮನಸಲ್ಲಿ ಇದ್ದದ್ದನ್ನು ಗೀಚಿದ್ದೇನೆ ... ಅದೂನು ಕನ್ನಡ ದಲ್ಲಿ ಬರೆಯೋಕೆ ಸ್ವಲ್ಪ ಕಷ್ಟ ಅಗ್ತಾ ಇದೆ. ಸಮಯ ಇಲ್ಲ ಅಂತ ಹೇಳ್ತಾ ಇಲ್ಲ್ಲ... ಅದರೂ ಸ್ವಲ್ಪ ಸಮಯ ಕಡಿಮೆ ಇದೆ.... ಕೆಲಸ ಜಾಸ್ತಿ ಇದೆ.
ಏನೋ ...ಇಂತವರನ್ನು ಪಡೆಯಲು ನಾನಂತೂ ತುಂಬಾನೆ ಪುಣ್ಯ ಮಾಡಿರಬೇಕು. ತುಂಬಾನೆ ಮಿಸ್ ಮಾಡ್ತಾ ಇದ್ದೇನೆ ಇಲ್ಲಿ ನಾನು. ಅಪ್ಪ ಅಮ್ಮ ಅಕ್ಕ ತಮ್ಮ .... love u sooo much .... ಮೈಲುಗಳ ಆಚೆಯಿಂದ....
ಪ್ರೀತಿಯಿಂದ ದಾಮು
really naavu tumba miss madkoteevi... :(
ReplyDelete