ಬದುಕು

ಬದುಕೆಂಬುದು ಕವಿತೆಯಾದಾಗ
       ಪದಗಳಾಗುವೆ ನಾ
ಬದುಕೆಂಬುದು ಪಯಣವಾದಾಗ
       ಪಯಣಿಗನಾಗುವೆ ನಾ
ಬದುಕೆಂಬುದು ಬೆಳಕಾದಾಗ
       ಕಿರಣವಾಗುವೆ ನಾ
ಬದುಕೆಂಬುದು ಕಲೆಯಾದಾಗ
       ಕಲಾಕಾರನಾಗುವೆ  ನಾ
ಬದುಕೆಂಬುದು ಪಾಠವಾದಾಗ
       ವಿದ್ಯಾರ್ಥಿಯಾಗುವೆ  ನಾ
ಬದುಕೆಂಬುದು ಸಂಗೀತವಾದಾಗ
       ಶ್ರುತಿಯಾಗುವೆ ನಾ
ಬದುಕೆಂಬುದು ಕನ್ನಡಿಯಾದಾಗ
       ಪ್ರತಿಬಿಂಬವಾಗುವೆ ನಾ
ಬದುಕೆಂಬುದು ಸಂಭಂಧಗಳ ಸರಪಳಿಯಾದಾಗ
        ಕೊಂಡಿಯಾಗುವೆ ನಾ
ಬದುಕೆಂಬುದು ದೀಪವಾದಾಗ
       ಬತ್ತಿಯಾಗುವೆ ನಾ
ಬದುಕೆಂಬುದು ಉಡುಗೂರೆಯಾದಾಗ
       ಸಂತೋಷದಿ  ಸ್ವೀಕರಿಸುವವನಾಗುವೆ ನಾ

2 comments:

  1. ಬದುಕಿನ ಬಗ್ಗೆ ಪರಿಪರಿಯಾಗಿ ಹೇಳಿದ್ದೀರಿ. ಬದುಕೇ ಹೀಗೆ ಎಷ್ಟು ಪರಿಯಾಗಿ ವರ್ಣಿಸಿದರೂ ಸಾಲದು... ಗ್ರೀನ ಸಿಗ್ನಲ ಕಥೆ ಇಷ್ಟ ಆಯ್ತು :)

    ReplyDelete
  2. ಪ್ರಭುವರೆ,
    ತುಂಬಾ ಖುಷಿಯಾಯಿತು ಓದಿದ್ದಕ್ಕೆ.
    ಹೀಗೆ ಬರೆಯುತ್ತಿರಿ .

    ReplyDelete